ಅರ್ಧ ಡಜನ್ ಫೀಲಿಂಗ್ಸ್..! Ardha Dozen Feelings ( Kannada)

Dr Vinayaka J K

Digital

Available

ಪ್ರೀತಿಯ ಮಾತು


ಪುಸ್ತಕದ ಹೆಸರೇ ಹೇಳುವಂತೆ ಡಾ|| ವಿನಾಯಕ ಜೆ.ಕೆ ಯವರ "ಅರ್ಧ ಡಜನ್ ಫೀಲಿಂಗ್” ಇಲ್ಲಿ ಆರು ಭಾಗಗಳಾಗಿ ರೂಪುಗೊಂಡಿದೆ. ಕೆಲವು ಸಣ್ಣ ಕಥೆಯಂತೆಯೂ, ಇನ್ನೂ ಕೆಲವು ಘಟನೆಗಳಂತೆಯೂ, ನಮ್ಮನ್ನು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ವೈದ್ಯಶಾಸ್ತ್ರವನ್ನು ಓದಿಕೊಂಡ ಯುವಕ ಪ್ರೇಮಶಾಸ್ತ್ರದಲ್ಲಿ ತಲ್ಲೀನನಾಗುವುದು ವಯೋಸಹಜವೇ ಆದರೂ, ಬಳಸಿರುವ ಭಾಷಾ ಪ್ರಯೋಗ ಹೊಸ ತಲೆಮಾರಿನ ಯುವಕ-ಯುವತಿಯರ ನಾಡಿಬಿಂಬವನ್ನೇ ಪ್ರತಿಬಿಂಬಿಸುತ್ತದೆ.
'ಪದ್ದು ಹುಡುಗಿಗೊಂದು ಪತ್ರ” ಗೌತಮಿ ಮತ್ತು ಚಿರಾಗ್‌ರ ಕಳೆದುಹೋದ ನಿಜವಾದ ಮದುವೆಯ ಸಂಭ್ರಮವನ್ನು ಕಲ್ಪಿಸಿಕೊಳ್ಳುತ್ತಾ, ಮೊದಲ ರಾತ್ರಿಯಲ್ಲಿ ಶಯ್ಯಾಗೃಹ ಸರಸಕ್ಕೆ ಸಜ್ಜಾಗುವ ವೇಳೆ ನಡೆವ ಹೊಸದೊಂದು ತಿರುವು, ನಮ್ಮನ್ನು ಮತ್ತೊಂದು ಪ್ರೇಮಮಯ ಸನ್ನಿವೇಶಕ್ಕೆ ಕೊಂಡೊಯ್ಯುತ್ತದೆ. ವಿದ್ಯಾವಂತ ನವದಂಪತಿಗಳ ನಡುವೆ ಸಹಜವಾಗಿ ನಡೆಯುವ ಸಂಭಾಷಣೆಗಳನ್ನು ಬಲು ಇಷ್ಟವಾಗುವಂತೆ ನಿರೂಪಿಸಿದ್ದಾರೆ.
“ನೆತ್ತರು” ಎಂಬ ಕಥೆಯಲ್ಲಿ ಒಬ್ಬ ಬಾಲಕನ ದೃಷ್ಟಿಯಿಂದ ಒಂದು ಕುಟುಂಬದ ಬದುಕನ್ನು ನೋಡುವ ಪ್ರಯತ್ನ, ಎರಡು ಧರ್ಮಗಳ ಯುವಕ-ಯುವತಿಯ ನಡುವೆ ನಡೆವ ಪ್ರೇಮ ದಾಂಪತ್ಯದಾಚೆ ಅವರ ಮಗನ ಚಿಂತಾಜನಕ ಕಥೆ ವಿಧಿಯ ಕೈವಾಡವೆನ್ನುವಂತೆ ಚಿತ್ರಿಸಿದ್ದಾರೆ. ವಿಷಾದದ ಛಾಯೆಯೊಂದಿಗೆ ಮುಗಿಯುವ “ನೆತ್ತರು” ಆಪ್ತವಾಗುತ್ತದೆ.
ಹಾದರದ ಕೇಸ್ ಒಂದನ್ನು ಕಥೆಯಾಗಿಸಿದಂತೆ ಕಂಡುಬರುವ “ಮೂರುಬಿಟ್ಟವರು” ಹೆಬ್ಬಳ ಅಜಾಗರೂಕತೆಯನ್ನು ಹೇಳುತ್ತಾ, ಮತ್ತೊಬ್ಬಳ ಕ್ರೌರ್ಯವನ್ನು ಹೇಳುತ್ತದೆ. ಸರಸ ಪ್ರಧಾನವಾಗಿಯೂ, ತಮಾಷೆಯಂತೆಯೂ ಕಾಣುವ “ವೆಜ್ ಲವ್ ಸ್ಟೋರಿ” ಹೀಗೊಂದು ಬಗೆಯಲ್ಲಿಯೂ ಪ್ರೇಮ ಹುಟ್ಟುವ ಪರಿಯನ್ನು ಹೇಳುತ್ತದೆ, ಸ್ನೇಹಸಂಬಂಧವೊಂದು ರಕ್ತಸಂಬಂಧವಾಗುವುದರೊಂದಿಗೆ ಅಂತ್ಯವಾಗುವ “ಹಣೆಬರಹದೊಂದಿಗೆ ಹೊಡೆದಾಡಿದವರು” ಕಥೆಯು ಹೊಸ ಬದುಕೊಂದರ ಸಂಕೇತವಾಗುತ್ತದೆ
ಒಟ್ಟು ಕಥೆಗಳಿಗಿಂತ ಕೊಂಚ ಭಿನ್ನವಾಗಿ ನಿಲ್ಲುವ ಕಥೆಯೆಂದರೆ “ಖುಷಿಯನು ಕಡ ಪಡೆದುಕೊಂಡವರು”, ತಾಯಿ-ಮಗಳ ಸಂಬಂಧ ಇಷ್ಟು ಗಾಢವಾಗಿ ವ್ಯಕ್ತವಾಗಿರುವ ಕಥೆಗಳು ಬಹುಶಃ ಕನ್ನಡದಲ್ಲಿ ಅಪರೂಪ. ಖಂಡಿತವಾಗಿಯೂ ಅತ್ಯಂತ ಮೆಚ್ಚುಗೆಗೆ ಪಾತ್ರವಾಗುವಕಥೆ ಇದು ಎನ್ನುವಲ್ಲಿ ಯಾವುದೇ ಸಂಶಯವಿಲ್ಲ.
“ಅರ್ಧ ಡಜನ್ ಫೀಲಿಂಗ್ಸ್ ನಲ್ಲಿ ನಿಜವಾಗಿಯೂ ನಮ್ಮ ಮನ ಮುಟ್ಟುವಂತ ಅನೇಕ ಅಂಶಗಳಿವೆ. ತೀರಾ ಗೌಣ ಎನ್ನುವಂತಹ ಸಂಗತಿಗಳನ್ನು ಸಹಾ ಬೃಹತ್ತಾಗಿ ತೋರಿಸುವ, ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಬರಹಗಾರ ಡಾ|| ವಿನಾಯಕ ಜೆ.ಕೆ ಯವರಿಗೆ ಸಾಹಿತ್ಯ ಕೃಷಿಯಲ್ಲಿ ಉತ್ತಮ ಭವಿಷ್ಯವಿದೆ. ಅಲ್ಲಲ್ಲಿ ಕಾವ್ಯಾತ್ಮಕ ಭಾವಾಭಿವ್ಯಕ್ತಿಯನ್ನು ಹೊರಸೂಸುವ ಇವರ ಲೇಖನಿ ನಮ್ಮನ್ನು ಚಕಿತಗೊಳಿಸುತ್ತದೆ. ಇಲ್ಲಿನ ಅನೇಕ ಸನ್ನಿವೇಶಗಳು ಅವರ ಅನುಭವಕ್ಕೆ ದಕ್ಕಿದ ಸಂಗತಿಗಳೆಂದು ನಾವು ಸುಲಭವಾಗಿ ಊಹಿಸಬಹುದು. ಆದರೆ ಅಲ್ಲಲ್ಲಿ ಸಿನಿಮಾ ಸಂಭಾಷಣೆಯ ಹಾಗೇ ಕಂಡುಬರುವುದರಿಂದ ಸಿನಿಮಾಗಳ ಪ್ರಭಾವ ಗಾಢವಾಗಿ ಆಗಿದೆ ಅಂದರೆ ಅತಿಶಯೋಕ್ತಿಯಲ್ಲಾ.
ಡಾ|| ವಿನಾಯಕ ಜೆ.ಕೆ ಯವರ ಈ “ಅರ್ಧ ಡಜನ್ ಫೀಲಿಂಗ್ಸ್” ಕನ್ನಡಿಗರ ಮನೆ-ಮನಗಳನ್ನು ತಲುಪಲೆಂದು ಆಶಿಸುತ್ತಾ, ಇನ್ನೂ ಟನ್ನು ಗಟ್ಟಲೇ ಇವರ ಮನದೊಳಗಿರುವ 'ಫೀಲಿಂಗ್' ಬಹುಬೇಗ ಬೇರೆ ಬೇರೆ ಪ್ರಕಾರಗಳಲ್ಲಿ ಹೊರ ಬರಲೆಂದು ಹಾರೈಸುವ.....
ನಿಮ್ಮ,
ವಿ. ನಾಗೇಂದ್ರ ಪ್ರಸಾದ್
ಚಿತ್ರಸಾಹಿತಿ, ನಿರ್ದೇಶಕ
********
ವಾಸ್ತು ಕರಾಬ್ ಇರುವ ಕಾಲೇಜ್ ಕೆನ್ನೆ ಕೆಂಪಾಗಿರುವ ಹುಡುಗೀರೇ ಜಾಸ್ತಿ ಕಾಡ್ತಾರಂತೆ ನಮಗೆ ಮಾತ್ರ ಯಾವಾಗೂ ನಿಮ್ಮದೆ ಚಿಂತೆ ಹರಯದ ಹುಡುಗರೆಲ್ಲ ಯಾವುದಕ್ಕೂ ಅಂತ್ರ - ಲಿಂತ್ರ ಹಾಕಿಸಿಕೊಂಡಿಲಿ
ಕಣ್ಣಿಗೆ ಎಣ್ಣೆ ಹಾಕೊಂಡು ಓದೊ ಟೈಂಲ್ಲಿ ಪ್ರೀತಿ ಪತ್ರ ಹತ್ರ ಇಟ್ಟಗೊಂಡು ಅಡ್ಡಾಡೋ ಪಾಗಲ್‌ಗಳೇ ಜಾಸ್ತಿ ಸಿಗ್ತಾರಂತೆ ನಮಗೆ ಮಾತ್ರ ಯಾವಾಗೂ ನಿಮ್ಮದೇ ಚಿಂತೆ ವಯಸ್ಸಿಗೆ ಬಂದ ಹುಡುಗಿರೆಲ್ಲ ಯಾವುದಕ್ಕೂ ಪರ ಚೇಂಜ್-ಲೀಂಜ್ ಇಟ್ಟುಕೊಂಡಿರಿ
ಹಾರ್ಮೋನ್ ಹಾರ್ನ್ ಹಾಕೊ ವಯಸ್ಸಲ್ಲಿ ಹುಟ್ಟೋ ಭಾವನೆಗಳೆಲ್ಲ ಬರೀ ಭ್ರಾಂತಿ ಹಾರ್ಟ್ ಹೀಬ್‌ಗೆ ಬಂದಾಗ ಫೀಜ್ ಮೇಂಟೇನ್ ಶಾಂತಿ ಇಲ್ಲಾ ಅಂದ್ರೆ ಆಗಿಬಿಟ್ಟಿತು ವಾಂತಿ-ಅಂತಿ
{ 'ಭಾವನೆಗಳೆರಡು ಭೇಟಿಯಾದ ಮೇಲೆ ಅವುಗಳನ್ನ ಬೇಟೆಯಾಡವಿಲಿ ಫೀಸ್....! "}
{ 'ನಾವು ಮಾಂಸಹಾರಿಗಳಾಗಿರಬಹುದು ಆದ್ರೆ, ಪ್ರೀತಿಯನ್ನ ಕೊಂದು ತಿನ್ನುವಷ್ಟು ಕಟುಕರಲ್ಲ"}
*******

   
Language Kannada
No of pages 63
Font Size Medium
Book Publisher Total Kannada
Published Date 01 Jan 2015

About Author

Author : Dr Vinayaka J K

NA

Related Books