ಅಡುಗೆ ಚಾತುರ್ಯ - Adugeya Chaathurya (Kannada)

Brunda Prabhakar

Digital

Available

ಶ್ರೀಮತಿ ಬೃಂದ ಪ್ರಭಾಕರ್: ಒಂದು ನೆನಪು
ದೀಪವು ನಿನ್ನದೆ, ಗಾಳಿಯೂ ನಿನ್ನದೆ
ಆರದಿರಲಿ ಬೆಳಕು
ಕೆ.ಎಸ್.ನರಸಿಂಹಸ್ವಾಮಿ ಅವರ ಈ ಪದ್ಯವನ್ನು ಓದಿದಾಗಲೆಲ್ಲ ನನಗೆ ನೆನಪಾಗುವುದು ನನ್ನ ಅತ್ತೆ
ಶ್ರೀಮತಿ ಬೃಂದರವರು. ಅವರನ್ನು ಬಹಳ ಹತ್ತಿರದಿಂದ ಬಲ್ಲ ನನಗೆ ಅವರೊಡನೆ ಕಳೆದ 28 ವರ್ಷ
ಒಂದು ಮರೆಯಲಾಗದ ಜೀವನಗಾಥೆ. ಅವರು ನಿಜವಾಗಿಯೂ ಸಾಧಿ, ಸಂಪನ್ನೆ, ಸೌಜನ್ಯದ ನಿಧಿ.
ಸುಸಂಸ್ಕೃತಿ, ಸಭ್ಯತೆ, ಸೌಹಾರ್ಧಗಳಲ್ಲಿ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು.
ಅವರು ಹಾಗು ನನ್ನ ಮಾವನವರಾದ ಶ್ರೀ ಪ್ರಭಾಕರ್ ಅವರ ದಾಂಪತ್ಯ ಎಲ್ಲರಿಗೂ ಒಂದು ಮಾದರಿ;
ಆದರ್ಶ. ಅವರು ಪರಸ್ಪರರ ಮೇಲೆ ಸಿಡುಕಿದ್ದು ಯಾರಿಗೂ ಗೊತ್ತಾಗಲಿಲ್ಲ. ಸಂಕಟದ ಸಂದರ್ಭದಲ್ಲಿ
ಇಬ್ಬರೂ ಬಿಕ್ಕಳಿಸಿದರು ನಿಜ. ಆಗಲೂ ಸದ್ದಾಗಲಿಲ್ಲ. ಆದರೆ ಅವರ ಸಹಬಾಳ್ವೆಯ ಒಂದೊಂದು
ದಿನವನ್ನು ನೋಡಿದ ನನಗೆ ಅದೊಂದು ಅಪೂರ್ವ ಅನುಭವ. ಬೃಂದರವರ ಕಷ್ಟ ಸಹಿಷ್ಣುತೆ
ಯಂತೂ ಅಪಾರವಾಗಿತ್ತು. ಜೀವನದ ತೀವ್ರವಾದ ಸವಾಲುಗಳನ್ನು ದೃಢಮನಸ್ಸಿನಿಂದ ಎದುರಿಸಿ
ನಿಂತು ಗೆದ್ದದ್ದು ನಿಜಕ್ಕೂ ಒಂದು ಸಾಹಸಗಾಥೆ. ನಮ್ಮ ಸಮಾಜದ ಹೆಣ್ಣುಮಕ್ಕಳ ಮನೋಬಲ,
ಸಂಕಲ್ಪಬಲ ಹಾಗು ಆತ್ಮಬಲಗಳಿಗೆ ಅವರು ಜೀವಂತ ಸಾಕ್ಷಿಯಾಗಿದ್ದರು. ಅವರ ವಾತ್ಸಲ್ಯ, ಆದರಣೆ,
ಉಪಚಾರಗಳು ಅವಿಸ್ಮರಣೀಯ. ಅವರು ಗದರುವಂತೆ ಮಾತನಾಡಿದ್ದನ್ನು ನಾನೆಂದೂ ಕೇಳಲಿಲ್ಲ.
ಬೇರೆಯವರಿಗೆ ಬೇಸರವಾಗುವಂತೆ ನಡೆದದ್ದನ್ನು ನಾನೆಂದೂ ನೋಡಿಲ್ಲ.
ಸ್ವಾಭಿಮಾನಕ್ಕೆ ಎಂದೂ ಧಕ್ಕೆ ತಾರದೆ, ಗೌರವದ ಜೀವನವನ್ನು ಶಿಸ್ತಿನಿಂದ ನಡೆಸಿದ ಅವರು, ಮನೆಯ
ಹಾಗು ಮನದ ಶುಭ್ರತೆಗೆ ನೀಡಿದ ಆದ್ಯತೆಯನ್ನು ನಾನೆಂದು ಮರೆಯಲಾರೆ. ಅವರ ಬಾಳನ್ನು
ನೆನೆದಾಗ ಅದೊಂದು ಅಪೂರ್ಣ ಕಾವ್ಯ” ಎಂದು ಭಾವಿಸಿದ್ದೇನೆ. ನನ್ನ ಅವರ ಬಾಂಧವ್ಯ
ತಾಯಿ-ಮಗನ ತರಹ. ನನ್ನ ಮೇಲೆ ಅವರಿಟ್ಟಿದ್ದ ಅಪಾರ ನಂಬಿಕೆ, ಪ್ರೀತಿಗೆ ಒಮ್ಮೊಮ್ಮೆ ನಾನು ಅರ್ಹನೆ
ಎನಿಸುತ್ತಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರ ಹತ್ತಿರದಲ್ಲಿದ್ದ ನನ್ನನ್ನು ಅವರು
ನೋಡುತ್ತಿದ್ದಾಗ ಹೃದಯ ಕಲಕುತ್ತಿತ್ತು. ಕಣ್ಣುಗಳು ಮಂಜಾಗುತ್ತಿದ್ದವು.

   
Language Kannada
No of pages 58
Book Publisher Total Kannada
Published Date 01 Jan 2018

About Author

Author : Brunda Prabhakar

NA

Related Books