ಇಂಡಿಯಾ @ 2050 - India @ 2050

Srikanth H Handrala

Digital

Available

ಸರ್ವವೂ ಕನ್ನಡಮಯ
ಈ ಕೃತಿಯಲ್ಲಿರುವ ವೈಶಿಷ್ಟ್ಯಗಳು
ಸಮಕಾಲೀನ ಭಾರತವನ್ನು ಆವರಿಸಿರುವ ಹಲವಾರು ಜ್ವಲಂತ ರಾಜಕೀಯ ಸವಾಲುಗಳಿಗೆ
ಶ್ರೀಕಾಂತ ಹೆಚ್ ಹಂದ್ರಾಳರ ವಿರಚಿತ ಇಂಡಿಯಾ @ 2050 (21ನೇ ಶತಮಾನದ ಭಾರತದ
ರಾಜಕೀಯ ವ್ಯವಸ್ಥೆಯ ಮರುಚಿಂತನೆ) ಎಂಬ ಕೃತಿಯು ಸಮರ್ಥ ಪರಿಹಾರಗಳನ್ನು
ನೀಡಬಲ್ಲದಾಗಿದ್ದು, ಪ್ರಸ್ತುತ ಭಾರತದ ರಾಜಕೀಯ ವ್ಯವಸ್ಥೆಯ ಜಡತ್ವ ಹಾಗೂ ಸರ್ಕಾರಗಳ
ಪ್ರತಿಸ್ಪಂಧನಾರಹಿತತೆಯಂತಹ ವ್ಯಾಧಿಗಳಿಗೆ ರಾಮಬಾಣವಾಗಬಲ್ಲದು. ಈ ಪುಸ್ತಕದಲ್ಲಿ
ಲೇಖಕರು ಚರ್ಚಿಸಿರುವ ವಿಷಯಗಳು ಹಾಗೂ ಸೂಚಿಸಿರುವ ಸುಧಾರಣಾ ಕ್ರಮಗಳು ಪ್ರಾಯೋಗಿಕ
ಸ್ವರೂಪವನ್ನು ಒಳಗೊಂಡಿದ್ದು, ಭಾರತದ ರಾಜಕೀಯ ವ್ಯವಸ್ಥೆಯನ್ನು ಶುದ್ಧಿಕರಿಸಿ
ಸುಧಾರಣೆಯನ್ನು ಸಾಧಿಸುವ ವಿಶ್ವಾಸವನ್ನು ಭಾರತೀಯರಿಗೆ ಮೂಡಿಸುತ್ತವೆ. ಕೊನೆಯದಾಗಿ,
ಪ್ರಸ್ತುತದ ರಾಜಕೀಯ ವ್ಯವಸ್ಥೆಯ ಗೋಜಲು - ಗೊಂದಲಗಳಿಗೆ, ಅಧಿಕಾರದ ಕಚ್ಚಾಟಗಳಿಗೆ ಮತ್ತು
ಕೋಟ್ಯಾಂತರ ಭಾರತೀಯರ ಅರಣ್ಯರೋಧನಗಳಿಗೆ ಪರಿಹಾರಗಳು ಇಲ್ಲವೇನು? ಎಂದು ಕೈಕಟ್ಟಿ
ಕುಳಿತಿರುವ ಅಸಂಖ್ಯಾತ ಭಾರತೀಯರಿಗೆ ಈ ಕೃತಿಯು ವಿಶ್ವಾಸದ ಆಶಾಕಿರಣವನ್ನು
ಮೂಡಿಸಬಲ್ಲದು ಹಾಗೂ ವಾಸ್ತವದಲ್ಲಿ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ನೆಲೆಗೊಳಿಸಬಲ್ಲದು.
ಶ್ರೀಕಾಂತ ಹೆಚ್. ಹಂದ್ರಾಳ
ಸಹಾಯಕ ಪ್ರಾಧ್ಯಾಪಕರು ಹಾಗು ಮುಖ್ಯಸ್ಥರು
ರಾಜಕೀಯ ವಿಜ್ಞಾನ ವಿಭಾಗ
ಸ. ಪ್ರ. ದ. ಕಾ ಶಾಂತಿನಗರ, ದೊಮ್ಮಲೂರು
ಬೆಂಗಳೂರು - ೫೬೦೦೭೧
ಡಾ|| ಕೆ. ಆರ್. ಮುದ್ದುಕೃಷ್ಣ
ಡೀನರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರು
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ.
ಟೋಟಲ್ ಕನಡ

   
Language Kannada
ISBN-13 9789394034037
No of pages 170
Book Publisher Total Kannada
Published Date 01 Jan 2022

About Author

Related Books