ಸಾಹಿತ್ಯ ಶಿಲ್ಪಿ ಚಿ. ಉದಯಶಂಕರ್ Saahithya Shilpi Chi Udayashankar (Kannada)

Shreenivas Prasad D S

Digital

Available

ಮುನ್ನುಡಿ


ನನ್ನ ಮಾರ್ಗದರ್ಶನದಲ್ಲಿ ದ್ರಾವಿಡ ವಿಶ್ವವಿದ್ಯಾನಿಲಯ ಕುಪ್ಪಮ್‌ಗಾಗಿ “ಕನ್ನಡ ಚಿತ್ರರಂಗಕ್ಕೆ ಚಿ.ಉದಯಶಂಕರ್ ಕೊಡುಗೆ” ಎಂಬ ವಿಷಯದ ಕುರಿತು ನನ್ನ ವಿದ್ಯಾರ್ಥಿ ಶ್ರೀ ಡಿ.ಎಸ್.ಶ್ರೀನಿವಾಸ ಪ್ರಸಾದ್ ಸಂಪ್ರಬಂಧವನ್ನು ರಚಿಸಿದ್ದಾರೆ. ಈ ಸಂಪ್ರಬಂಧವನ್ನು ನಾನು ಅಮೂಲಾಗ್ರವಾಗಿ ಪರಿಶೀಲಿಸಿದ್ದೇನೆ ಈ ಸಂಬಂಧ ಸೂಕ್ತ ಸಲಹೆಗಳನ್ನು ಸಹ ನೀಡಿರುತ್ತೇನೆ.
ಕನ್ನಡ ಚಲನಚಿತ್ರರಂಗದ ದೊಡ್ಡ ಹೆಸರಾದ ಚಿ.ಉದಯಶಂಕರ್ ಕುರಿತು ಈ ಸಂಪ್ರಬಂಧ ಅವರ ಬರವಣಿಗೆಯ ಶೈಲಿ ಮತ್ತು ಅದರೊಳಗಿನ ಸತ್ವವನ್ನು ಒಳಗೊಂಡಿದೆ. ಚಿತ್ರಸಾಹಿತಿಯ ಕುರಿತು ಈ ರೀತಿಯ ಎಂ.ಫಿಲ್ ಪ್ರಯತ್ನ ಆಗಿರಲಿಲ್ಲ. ಆ ಕೊರತೆಯನ್ನು ಶ್ರೀನಿವಾಸ ಪ್ರಸಾದ್ ಅವರ ಸಂಪ್ರಬಂಧ ನೀಗಿಸಿದೆ ಮತ್ತು ಉದಯಶಂಕರ್ ಅವರ ಸಾಹಿತ್ಯದ ಸರಳತೆ ವೈಶಿಷ್ಟ್ಯವನ್ನು ಶ್ರೀನಿವಾಸ ಪ್ರಸಾದ್ ಅದರ ಎಲ್ಲಾ ಮಗ್ಗುಲುಗಳಲ್ಲಿಯೂ ಶೋಧಿಸಿದ್ದಾರೆ. ಚಲನಚಿತ್ರ ಮತ್ತು ಅದರ ವಿವಿಧ ಕ್ಷೇತ್ರಗಳ ಕುರಿತಾದ ಅಧ್ಯಯನ ಅಗತ್ಯವಾಗಿ ಆಗಬೇಕಾದ ಈ ಸಂದರ್ಭದಲ್ಲಿ ಶ್ರೀನಿವಾಸ ಪ್ರಸಾದ್ ಅವರ ಕನ್ನಡ ಚಿತ್ರರಂಗಕ್ಕೆ ಚಿ. ಉದಯಶಂಕರ್ ಕೊಡುಗೆ ಸಂಪ್ರಬಂಧವು ಹಲವು ವಿಶ್ಲೇಷಣೆಗಳಿಗೆ ಒಳಪಟ್ಟು ಉತ್ತಮವಾಗಿದೆ.
ಚಿ. ಉದಯಶಂಕರ್ ಕುರಿತು ಮಾಹಿತಿಗಾಗಿ ಕನ್ನಡ ಚಿತ್ರಂಗದ ಕಲಾವಿದರಾದ ಎಸ್.ಶಿವರಾಮ್, ಗೀತಪ್ರಿಯ, ಕೆ.ಎಸ್.ಎಲ್.ಸ್ವಾಮಿ (ರವಿ), ದ್ವಾರಕೀಶ್, ಸಿದ್ಧಲಿಂಗಯ್ಯ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್, ರಾಜನ್ ಇವರೆಲ್ಲರನ್ನೂ ಸಂದರ್ಶಿಸಿ ಸಿದ್ಧಪಡಿಸಿದ ಈ ಸಂಪ್ರಬಂಧದ ಶ್ರಮ ಶ್ಲಾಘನೀಯ.
ಒಬ್ಬ ಬರಹಗಾರರನ್ನು ಒಬ್ಬ ಅಭಿಮಾನಿ ಇಷ್ಟೊಂದು ಪ್ರೀತಿಸುತ್ತಾರೆ ಎಂಬುದಕ್ಕೆ “ಸವ್ಯಸಾಚಿ” ಗೀತರಚನಕಾರರಾದ ಶ್ರೀ ಚಿ॥ ಉದಯಶಂಕರ್ ಅವರನ್ನು ಅವರ ಸಾಹಿತ್ಯಾಭಿಮಾನಿ ಶ್ರೀ ಡಿ.ಎಸ್.ಶ್ರೀನಿವಾಸ ಪ್ರಸಾದ್ ಅವರು ಮೆಚ್ಚಿ ಬರೆದಿರುವ ಈ ಬರಹವೇ ಸಾಕ್ಷಿ.
ಎಂಥ ಕಠಿಣವಾದ ಚಿತ್ರವಾದ ಸನ್ನಿವೇಶಕ್ಕೂ ಒಂದು ಗಂಟೆಯಲ್ಲಿ ಸೂಕ್ತವಾದ ಹಾಡು ಬರೆದು ಕೊಡುವ ನೈಪುಣ್ಯ ಚಿ॥ ಉದಯಶಂಕರ್ ಅವರಿಗೆ ಸಿದ್ಧಿಸಿತ್ತು. ನಾನು, ಅವರು ಅನೇಕ ಚಿತ್ರಗಳಿಗೆ ಒಟ್ಟೋಟ್ಟಿಗೆ ಕೂತು ಸಂಗೀತ ನಿರ್ದೇಶಕರುಗಳಿಗೆ ಹಾಡು ಬರೆದದ್ದು ಉಂಟು. ಹೀಗೆ ಅವರ ಒಡನಾಟದಲ್ಲಿ ನಾನು ಕಂಡುಕೊಂಡ ಸತ್ಯ, ಸ್ಪಷ್ಟ; ಚಿ॥ ಉದಯ್‌ಶಂಕರ್‌ದು ಮುಗ್ಧ ಮನಸ್ಸು.
ಶೀಘ್ರವಾಗಿ ಸನ್ನಿವೇಶ ಗ್ರಹಿಸುವ ಪರಿ; ಸಂಗೀತ ನಿರ್ದೇಶಕರು ನೀಡುತ್ತಿದ್ದ ಸ್ವರ ಪ್ರಸ್ತಾರಗಳಿಗೆ ಸೂಕ್ತ ರೀತಿಯಲ್ಲಿ ಮಾತು ಜೋಡಿಸುತ್ತಿದ್ದ ತನ್ಮೂಲಕ ಸೊಗಸಾಗ ಹಾಡು ನೀಡುತ್ತಿದ್ದ ಕಾವ್ಯ ಕೌಶಲ ನಿಜಕ್ಕೂ ಸೋಜಿಗ; ಅದ್ಭುತ ಪ್ರತಿಭೆ. ಹೊತ್ತಿಗೆ ಒದಗುವ ವಾಕ್ಸಂಪತ್ತು! ಪ್ರಾಸ ಕೂಡಿಸುವ ಜಾಣ್ಮ. ಸರಳವಾಗಿ ಬರೆಯುವ ಕಲೆ ರೂಢಿಸಿಕೊಂಡ ಪರಿ. ಎಲ್ಲರ ಜೊತೆ ಸರಳವಾಗಿ ಬೆರೆಯುವ ಅವರ ಸ್ನೇಹಪ್ರಿಯತೆ, ಈ ಎಲ್ಲ ರೀತಿ ಇತ್ಯಾತ್ಮಕ ಗುಣಗಳಿಂದ ಅವರು ಜನಪ್ರಿಯ ಗೀತ ರಚನಕಾರಾಗಿದ್ದರು ಅಂಥ ಹಿರಿಯ ಬಗ್ಗೆ ನಿಜಕ್ಕೂ ಭಕ್ತಿ, ಶ್ರದ್ದೆ, ಅಭಿಮಾನಗಳಿಂದ ನನ್ನ ವಿದ್ಯಾರ್ಥಿ ಮಿತ್ರ ಶ್ರೀ ಡಿ.ಎನ್.ಶ್ರೀನಿವಾಸ ಪ್ರಸಾದ್ ಬರೆದಿರುವ ಈ ಬರಹ ಅತ್ಯಂತ ಸರಳ, ಸುಂದರ, ಪಾರದರ್ಶಕವಾದುದಾಗಿದೆ.
ಅಧ್ಯಯನ ಅಮೂಲಗ್ರವಾಗಿದೆ. ಅಗಣಿತ ಮಾಹಿತಿ ಇದೆ; ವಿಶ್ಲೇಷಣೆ ಸೂಕ್ತವಾಗಿದೆ. ರಸಿಕ ಸಂಪ್ರದಾಯದ ಬರಹ ಇದಾಗಿದೆ. ಚಿ॥ ಉದಯಶಂಕರ್ ಅವರ ಹಾಡುಗಳ ಪಟ್ಟಿ ಶ್ರೀನಿವಾಸ ಪ್ರಸಾದ್‌ಗೆ ಚೆನ್ನಾಗಿಯೇ ನೆನಪಿನಲ್ಲಿದೆ; ಹಾಡುಗಳಿಗೆ ಅಳವಡಿಸಿದ ರಾಗಗಳ ಬಗೆಗೂ ಲೇಖಕರಿಗೆ ಸರಿಯಾದ ಅರಿವಿದೆ; ಸ್ವರ ಪ್ರಸ್ತಾರದ ಸಂಗೀತ ಜ್ಞಾನವಿದೆ. ಹೀಗಾಗಿ ಉದಯಶಂಕರ್ ಅವರ ಗೀತೆಗಳ ಮೌಲ್ಯಮಾಪನಕ್ಕೆ ಒಂದು ವಿಶಿಷ್ಟ ಬೆಲೆ ಪ್ರಾಪ್ತವಾಗಿದೆ.
ಒಬ್ಬ ಸಾಹಿತ್ಯಾಭ್ಯಾಸಿ ಮುಕ್ತವಾಗಿ ಸಾಹಿತ್ಯವನ್ನು ಆಸ್ವಾದಿಸಿದ ರೀತಿಯಲ್ಲೇ ಗ್ರಹಿಕೆಗೆ ತಕ್ಕ ಅಭಿವ್ಯಕ್ತಿ ಸಾಧ್ಯ ಎಂಬುದಕ್ಕೆ ಶ್ರೀನಿವಾಸ ಪ್ರಸಾದರ ಬರಹವು ಮಾದರಿಯಾಗಿದೆ. ಅದಕ್ಕಾಗಿ ಲೇಖಕರನ್ನು ನಾನು ಹೃರ್ತ್ತೂಕವಾಗಿ ಅಭಿನಂದಿಸುತ್ತೇನೆ.
ಪದ್ಮಶ್ರೀ ಡಾ. ದೊಡ್ಡರಂಗೇಗೌಡ.

   
Language Kannada
ISBN-10 9789383727254
ISBN-13 9789383727254
No of pages 255
Book Publisher Total Kannada
Published Date 01 Jan 2018

About Author

Related Books