ನನ್ನ ತಮ್ಮ ಶಂಕರ - Nanna Thamma Shankara (Kannada)

Anant Nag

Digital

Available

ಏಕೆ ಈ ಶಂಕರ್ ನಾಗ್ ಹುಚ್ಚು ನಮ್ಮ ಜನರಿಗೆ?
ಬೆಂಗಳೂರಿನಲ್ಲ. ಸುಮಾರು 1,00,000 ಆಟೋರಿಕ್ಷಾಗಳು ಇರಬಹುದು.
ಅವುಗಳಲ್ಲಿ ಸುಮಾರು 8C% ಆಟೋಗಳ ಮೇಲೆ ಶಂಕರ್ ನಾಗ್ ಚಿತ್ರವಿದೆ.
ಆಶ್ಚರ್ಯವೆಂದರೆ ಶಂಕರ್ ನಾಗ್ ಅಲಾನಂತರದಲ್ಲಿ ಹುಟ್ಟ ಇಂದು ಆಟೋ
ಚಾಲಕರಾಗಿರುವ ಎಷ್ಟೋ ಮಂದಿ ತಮ್ಮ ಆಟೋಗಳ ಹಿಂದೆ ಶಂಕರ್‌ನಾಗ್‌ರ
ಚಿತ್ರಗಳನ್ನು ಅಂಟಿಸಿಕೊಂಡಿದ್ದಾರೆ. ಇದು ಕೇವಲ ಅಭಿಮಾನವಲ್ಲ. ಬದಲಗೆ ಕನ್ನಡಿಗರಿಗೆ ಅವರ
ಮೇಲರುವ ಪ್ರೀತಿ, ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೇರುನಟ ಡಾ. ರಾಜ್ ನಂತರ
ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಎಂದರೆ ಅದು ಶಂಕರ್ ನಾಗ್ ಮಾತ್ರ.
ಕನ್ನಡದ ನಿಮ್ಮ ಎಲ್ಲಾ ಕಾಲದ ಅಚ್ಚು ಮೆಚ್ಚಿನ ಹತ್ತು ಚಲನಚಿತ್ರಗಳ ಪಟ್ಟಿ ಮಾಡಿ ನೋಡಿ, ಅದರಲ್ಲ
ಕಡಿಮೆ ಎಂದರೂ ಮೂರು ಶಂಕರ್ ನಾಗ್ ನಸಿದ, ನಿರ್ದೇಶಿಸಿದ ಪಾತ್ರಗಳಿರುತ್ತವೆ. ಮಾಲ್ಗುಡಿ
ಡೇಸ್ ಭಾರತದ ಟೆಲವಿಷನ್ ಇತಿಹಾಸದಲ್ಲ ಎಂದೂ ಮರೆಯಲಾಗದ ಒಂದು ಅನುಭವ ನೀಡುವ
ಕಲಾಕೃತಿ ಅಂತ ಚಿತ್ರಪ್ರೇಮಿಗಳ ಅಭಿಪ್ರಾಯ, ಕನ್ನಡ ಚಲನಚಿತ್ರಗಳ ಧ್ವನಿಮುದ್ರಣಕ್ಕೆ ಮದ್ರಾಸಿನ
ಮೇಲೆ ಅವಲಂಬಸಿದ್ದ ಕಾಲದಲ್ಲ. ಬೆಂಗಳೂರಿನಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಸಂಕೇತ್
ಎಲಾಕ್ಟ್ರಾನಿಕ್ಸ್ ಎಂಬ ಧ್ವನಿಮುದ್ರಣ ಸ್ಟುಡಿಯೋವನ್ನು ಸ್ಥಾಪಿಸಿದ ಹೆಗ್ಗಳಿಕ ಶಂಕರ್ ನಾಗ್‌ರದ್ದು.
ಕ್ಲಿಂಟ್ ಅನ್ನೋ ಒಂದು ಚಿತ್ರ ನೋಡಿ, ಯು ವಿ ನೋ ಹೂ ಶಂಕರ್ ನಾಗ್ ಇಸ್, ಅಂತ
ಬೆಟ್ ಮಾಡೋ ಜನ ಉಂಟು, ಇಷ್ಟೊಂದು ಅಭಿಮಾನ ಏಕೆ? ಕೇವಲ 12 ವರ್ಷಗಳ
ಸಮಯದಲ್ಲೇ ಸುಮಾರು 80 ಚಿತ್ರಗಳಲ್ಲಿ ನಟಸಿ, ಒಂದಕ್ಕಿಂತ ಒಂದು ಉತ್ತಮ ಚಿತ್ರಗಳನ್ನು
ನಿರ್ದೇಶಿಸಿದ ಚೈತನ್ಯ ಈ ಮನುಷ್ಯನಿಗೆ ಎಲ್ಲಂದ ಬಂತು?
ಶಂಕರ್ ಇದ್ದಿದ್ರೆ ನಮ್ಮ ಕನ್ನಡ ಚಿತ್ರರಂಗ ಎಲ್ಲೋ ಇರುತ್ತಿತ್ತು ಎಂದು ಕೆಲವರು ಅಭಿಪ್ರಾಯ
ಪಟ್ಟಿದ್ದಾರೆ. 2014ರ ಈ ಹೊತ್ತಿನಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ರೈಲನ್ನು
ಆಗಿನ ಕಾಲಕ್ಕೇ ಕಾರ್ಯ ರೂಪಕ್ಕೆ ತರಲು ಬಯಸಿದ್ದರು. ಶಂಕರ್ ನಾಗ್, ಕೇವಲ
ಚಲನಚಿತ್ರಗಳಷ್ಟೇ ಅಲ್ಲ, ಇಡೀ ಬೆಂಗಳೂರಿಗೆ ಅವರಂತಹ ಒಬ್ಬ ದೂರ ದೃಷ್ಟಿ ಮತ್ತು ವಿಶಾಲ ದೃಷ್ಟಿ
ಇರುವ ನಾಯಕ ಬೇಕಿತ್ತು, ಬೇಕಿದೆ ಎಂದು ಹೇಳುವವರು ಸಾವಿರಾರು ಮಂದಿ.
ಶ್ರೀ
ಈ ಎಲ್ಲ ಪ್ರಶ್ನೆಗಳಿಗೆ, ಅವರನ್ನು ಬಹಳ ಹತ್ತಿರದಿಂದ ಬಲ್ಲ, ಅವರೊಂದಿಗೆ ಹುಟ್ಟಿ ಬೆಳೆದ ಅವರ ಅಣ್ಣ
ಅನಂತ ನಾಗ್‌ರಿಂದಲೇ ಉತ್ತರ ಪಡೆಯಬಹುದೇ? ಈ ಪ್ರಶ್ನೆಗಳ ಉತ್ತರಗಳ ಜೊತೆಗೆ,
ಶಂಕರ್ ನಾಗ್‌ರ ಬದುಕು.. ಅವರ ಮನಸ್ಸು ಯೋಚಿಸುತ್ತಿದ್ದ ರೀತಿ.. ಅವರ ಕನಸುಗಳು.. ಅವರ
ಕಾರ್ಯ ವೈಖರಿ.. ಬದುಕಿನೆಡೆಗಿನ ಅವರ ಅದಮ್ಯ ಉತ್ಸಾಹ, ಇವುಗಳ ಪರಿಚಯವು
ಆಗಬಹುದೇ?
ಓದಿ ನೋಡಿ.. ಶ್ರೀ ಅನಂತ ನಾಗ್‌ರ ಪ್ರೀತಿಯ, ಕನ್ನಡಿಗರ ಅಭಿಮಾನದ.. ನನ್ನ ತಮ್ಮ ಶಂಕರ.
ಹೈ

   
Language Kannada
ISBN-13 9788192226903
No of pages 190
Book Publisher Total Kannada
Published Date 01 Jan 2010

About Author

Author : Anant Nag

NA

Related Books