ಕಣ್ಣೀರಜ್ಜ ಮತ್ತು ಇತರ ಕಥೆಗಳು Kanneerajja Mattu Itara Kathegalu (Kannada)

Gireesh Jamadhagni

Digital

Available

ಪ್ರಕಾಶಕರ ಮಾತು


ಗೆಳೆಯ ಗಿರೀಶ್ ಜಮದಗ್ನಿಯವರ “ಕಣ್ಣೀರಜ್ಜ ಮತ್ತು ಇತರ ಕಥೆಗಳು" ಕಥಾ ಸಂಕಲನ ಪುಸ್ತಕವು ನಮ್ಮ ಪ್ರಕಾಶನ ಸಂಸ್ಥೆಯಿಂದ ಹೊರಬರುತ್ತಿರುವ ಪ್ರಥಮ ಕಥಾಸಂಕಲನ ಪುಸ್ತಕ. ಕಡಲಾಚೆ ಇದ್ದರೂ ಕನ್ನಡದ ಸಂಪರ್ಕ ಉಳಿಸಿಕೊಂಡು ಸಾಹಿತ್ಯದಲ್ಲಿ ಕೃಷಿ ಆರಂಭಿಸಿರುವ ಗಿರೀಶ್‌ರವರ ಮೊದಲ ಪುಸ್ತಕವನ್ನು ಪ್ರಕಟಿಸುತ್ತಿರುವುದು ನಮಗೆ ಖುಷಿ ತರುತ್ತಿದೆ. ನಮ್ಮ ಸಂಸ್ಥೆಯಿಂದ ಹೆಚ್ಚಾಗಿ ಸಿನೆಮಾ ಸಂಬಂಧಿತ ಪುಸ್ತಕಗಳನ್ನು ಪ್ರಕಟಿಸುವುದಕ್ಕೆ ಆದ್ಯತೆ ನೀಡುತ್ತೇವೆ. ಸೋಜಿಗದ ಸಂಗತಿಯೆಂದರೆ ನಮ್ಮ ಸಿನೆಮಾ ಮಂದಿ ಕನ್ನಡದಲ್ಲಿ ಕಥೆಗಳಲ್ಲ ಎಂದು ಕೊರಗುತ್ತಿರುತ್ತಾರೆ ಅಥವ ಕತೆಗಳ ಆಯ್ಕೆಯ ಪರಿ ತಿಳಿಯದೇ ಒದ್ದಾಡುತ್ತಿರುವವರು ಜಾಸ್ತಿ ಎಂಬುದು ನನ್ನ ಅನಿಸಿಕೆ. ಆ ಕಥೆಗಳ ಆಯ್ಕೆ ಕಷ್ಟ ಎನಿಸುವವರಿಗೆ ಇಗೋ ಇಲ್ಲಿ ಒಂದಷ್ಟು ಕಥೆಗಳು, ಗಿರೀಶ್‌ರವರನ್ನು ಕನ್ನಡ ಕಥಾ ಜಗತ್ತಿಗೆ ಸ್ವಾಗತಿಸುತ್ತಾ. ಕನ್ನಡ ಓದುಗರಿಗೆ ಒಂದಷ್ಟು ವಿಭಿನ್ನ ಕಥೆಗಳನ್ನು ನೀಡುವ ಇಚ್ಛೆ ನಮ್ಮದು.
ವಿ. ಲಕ್ಷ್ಮೀಕಾಂತ್

   
Language Kannada
ISBN-13 9789383727018
No of pages 117
Font Size Medium
Book Publisher Total Kannada
Published Date 01 Jan 2019

About Author

Author : Gireesh Jamadhagni

NA

Related Books