ಕಲ್ಕಿ - Kalki (Kannada)

Likitha Patel

Digital

Available

'ಕಲ್ಕಿ'ಯ ಕಥೆ ಸರಳತೆಯಿಂದ ಸಂಕೀರ್ಣತೆಯತ್ತ ಸಾಗಿ ಕೌತುಕದಲ್ಲಿ ಮುಗಿಯುವಂಥದ್ದು.
ಕಾದಂಬರಿಯ ಪ್ರಧಾನ ಪಾತ್ರ ವೃತ್ತಿಯಿಂದ ವಕೀಲನಾದ ರಮೇಶ್, ಆಯ್ಕೆಮಾಡಿಕೊಂಡ
ವೃತ್ತಿಯ ವಿಚಾರದಲ್ಲಿ ಅವನಿಗೆ ಪ್ರೀತಿಯೂ ಇದೆ, ಗೌರವವೂ ಇದೆ, ನಿಷ್ಠೆಯೂ ಇದೆ.
ನಾಲ್ಕಾರು ಜನ ಜ್ಯೂನಿಯರ್‌ಗಳನ್ನು ಇಟ್ಟುಕೊಂಡು ಶಿಸ್ತು ಮತ್ತು ದಕ್ಷತೆಗಳಿಂದ
ಕಾರ್ಯನಿರ್ವಹಿಸುವ ಅವನು ನ್ಯಾಯಾಲಯ ಹಾಗೂ ಕಚೇರಿಯ ಒತ್ತಡಗಳನ್ನು ಅಲ್ಲೇ
ಬಿಟ್ಟು, ಮನೆಯಲ್ಲಿ ಪತ್ನಿ ಅನುಪಮಾಳನ್ನು ಸದಾ ಸಂತೋಷ ಸಮಾಧಾನಗಳಲ್ಲಿ ಇರುವಂತೆ
ಮಾಡಿ ಪತಿಯ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದವನು. ರಮೇಶ-ಅನುಪಮಾ ಅವರದು ಸರಸ
ಸಾಮರಸ್ಯಗಳ ಅನುರೂಪ ದಾಂಪತ್ಯ. ಆಗಾಗ ಹಬ್ಬ ಹರಿದಿನಗಳ ನೆಪದಲ್ಲಿ ಪತ್ನಿಯೊಂದಿಗೆ
ಅವಳ ತವರೂರಿಗೂ ಹೋಗಿ ಅತ್ತೆ ಮಾವನಿಗೂ ಸಂತೋಷವುಂಟುಮಾಡುವ ಜಾಯಮಾನ
ಅವನದು. ಅಲ್ಲಿಗೆ ಹೋದಾಗ ಮಾವನ ಸಂಬಂಧಿಕರ ಒಂದು ಕುಟುಂಬದವರು ವಯಸ್ಸಾದ
ಅಜ್ಜ ಅಜ್ಜಿಯರನ್ನು ಊರಾಚೆಯ ಗುಡಿಸಲಿನಲ್ಲಿ ಕೊನೆಗಾಲವನ್ನು ಕಳೆಯುವಂತೆ
ಮಾಡಿರುವುದನ್ನು ನೋಡಿ ಮರುಗುವಂಥ ಹೃದಯವಂತ, ಗೆಳೆಯರೊಂದಿಗೆ ಮಧುರ
ಬಾಂಧವ್ಯವನ್ನು ಇರಿಸಿಕೊಳ್ಳುವಂಥ ಸ್ನೇಹಜೀವಿ, ದುರಾಸೆ ಇಲ್ಲದವನು, ಪರೋಪಕಾರಕ್ಕೆ
ಸದಾ ಮುಂದೆ ಇರುವವನು.

   
Language Kannada
ISBN-13 9789383727209
No of pages 140
Book Publisher Total Kannada
Published Date 01 Jan 2017

About Author

Author : Likitha Patel

NA

Related Books