ಎಲ್ಲರಂತೆ ಏಕೆ? Ellarnte Eke ( Kannada)

Kavya Raj

Digital

Available

21ನೇ ಶತಮಾನದ ಯುವ ಪೀಳಿಗೆಯ ಆಧುನಿಕ ಲೇಖಕಿಯರು ಚೊಚ್ಚಲಕೃತಿಗಳಿಂದ ಬೆಳಕಿಗೆ ಬರುತ್ತಿರುವವರಲ್ಲಿ ಕಾವ್ಯರಾಜ್ ಒಬ್ಬರು. ಈವತ್ತು ವಿದ್ಯುನ್ಮಾನ ಮಾಧ್ಯಮಗಳು, ಪುಸ್ತಕ ಮುದ್ರಣ ಮಾಧ್ಯಮದ ಜೊತೆಗೆ ಪತ್ರಿಕೆಗಳು ಅಧಿಕ ಸಂಖ್ಯೆಯಲ್ಲಿ ಯುವಲೇಖಕರಿಗೆ ತೆರೆದ ಬಾಗಿಲಾಗಿದೆ. ಆದರೆ ಗ್ರಂಥ ಪ್ರಕಾಶಕರು ಹೊಸ ಲೇಖಕರಿಗೆ ಅವಕಾಶ ಪ್ರಾಶಸ್ಯವನ್ನು ಸಾಕಷ್ಟು ಪ್ರಮಾಣದಲ್ಲಿ ಕೊಡುತ್ತಿಲ್ಲ. ಪ್ರಸಿದ್ಧಲೇಖಕರ ಕೃತಿಗಳಿಗೆ ಮರುಮುದ್ರಣಗಳಿಗೆ ಪ್ರಾಶಸ್ಯ ನೀಡುತ್ತಿವೆ. ಎಲ್ಲೋ ಕೆಲವು ಪ್ರಕಾಶಕರು, ಪತ್ರಿಕೆಯವರು ಮತ್ತು ಇತರೆ ಮಾಧ್ಯಮದವರು ಹೊಸ ಯುವ ಲೇಖಕರಿಗೆ ಚೊಚ್ಚಲಕೃತಿಕಾರರಿಗೆ ಅವಕಾಶ ಪ್ರಾಶಸ್ತ್ರ ನೀಡುತ್ತಿದ್ದಾರೆ. ಈ ರೀತಿ ಪ್ರಕಾಶಕರಲ್ಲಿ ಟೋಟಲ್ ಕನ್ನಡದ ಲಕ್ಷ್ಮೀಕಾಂತ್ ಅವರೂ ಒಬ್ಬರು. ಕನ್ನಡದ ಎಲ್ಲ ಬಗೆಯ ಚಟುವಟಿಕೆಗಲ್ಲೂ ಭಾಗವಹಿಸುತ್ತಿರುವ ಕ್ರಿಯಾಶಾಲಿಗಳಲ್ಲಿ ಒಬ್ಬರು.
ಅಮೆರಿಕಾದಲ್ಲಿ ನೆಲೆಸಿರುವ ಕನ್ನಡತಿ ಕಾವ್ಯರಾಜರ ಚೊಚ್ಚಲ ಕಾದಂಬರಿ ಎಲ್ಲರಂತೆ ಏಕೆ ಸಾಮಾಜಿಕ ಕಾದಂಬರಿ, ಅಮೆರಿಕಾದ ಕನ್ನಡತಿಯರ ಬದುಕಿನ ಹಲವು ಮುಖಗಳನ್ನು ತೋರಿಸುವ ಕಥಾಮಾಲಿಕೆ ಆಗಿದೆ. ಪಿಯುಸಿ ಶ್ವೇತಾ, ಸ್ನೇಹಾ, ಶಿವಾನಿ, ಕವಿತಾ ಕುಸುಮಾ, ಶಾರದಾ, ನಿಶಾ, ಧನ್ಯಾ ಕಾಲೇಜಿನ ಬದುಕಿನಿಂದ ವೈವಾವಿಕ ಜೀವನದವರೆಗೆ ಅವರ ತಾರುಣ್ಯ, ಆಸೆ ಆಕಾಂಕ್ಷೆಗಳು ಅವರಿಗೆ ದೊರೆತ ಅವಕಾಶಗಳು, ಹೊಸ ತಲೆಮಾರಿನ ಆಶೋತ್ತರಗಲು ಹಳೆಯ ತಲೆಮಾರಿನ ಮೌಲ್ಯಗಳು ಇವುಗಳ ಪ್ರತಿಪಾದನೆ ಈ ಕಾದಂಬರಿಯಲ್ಲಿ ಸಣ್ಣ ಕಥೆಗಳಂತೆ ವ್ಯಕ್ತಿಚಿತ್ರಗಳ ಹಾಗೆ ಮೂಡಿವೆ. ಪ್ರಧಾನವಾಗಿ ಸ್ನೇಹಾ ಜೀವನ ಭಾರತೀಯ ಮೌಲ್ಯಗಳ ಬದುಕಿನ ಅಮೆರಿಕಾ ಬದುಕಿನ ವಿದೇಶೀಜೀವನದ ಸ್ನೇಹಾ ಇವರಿಬ್ಬರ ಚಿತ್ರಣ ಪ್ರಧಾನವಾಗಿ ಕಂಡುಬರುತ್ತದೆ. ಒಟ್ಟಿನಲ್ಲಿ ಇಲ್ಲಿಯ ಯುವತಿಯರ ಬದುಕಿನ ಕಥೆ ಆಧುನಿಕ ಜೀವನದ ಸಾಕ್ಷಿಗಳಾಗಿವೆ. ಓದಿಸಿಕೊಂಡುಹೋಗುವ ಆಧುನಿಕ ಯುವತಿಯರ ಹಾಗೂ ಸಾಂಪ್ರದಾಯಿಕ ಬದುಕಿನ ಹುಡುಗಿಯರ ಬಾಳಿನ ಕಥೆ ಈ ಕಾದಂಬರಿಯಲ್ಲಿ ಮೂಡಿದೆ. ಆಧುನಿಕ ಜನಜೀವನಕ್ಕೆ ಮತ್ತು ಅಮೆರಿಕಾ ಕನ್ನಡಯುವತಿಯರ ಬದುಕಿಗೆ ಹಿಡಿದ ಕನ್ನಡಿ ಈ ಕೃತಿ.
ಲೇಖಕಿಂತ ವೆ ದಲ ಕಾದಂಬರಿ ಸಾಕಷ್ಟು ಕುತೂಹಲಕಾರಿಯಾಗಿದ್ದು ಸಾಹಿತ್ಯಕೃಷಿಮಾಡಿದಂತೆಲ್ಲಾ ಒಳ್ಳೆಯ ಲೇಖಕಿ ಆಗಬಲ್ಲಳು ಎಂಬುದನ್ನು ಸಾರುತ್ತದೆ.
ತರುಣ 
ಪ್ರೊ. ಜಿ. ಅಶ್ವತ್ಥನಾರಾಯಣ
ನಿವೃತ್ತ ಕನ್ನಡ ಪ್ರಾಧ್ಯಾಪಕರು
ಬೆಂಗಳೂರು.

   
Language Kannada
ISBN-13 978819226903
No of pages 184
Book Publisher Total Kannada
Published Date 01 Jan 2020

About Author

Author : Kavya Raj

NA

Related Books